ಅಂತರ್ಜಾಲ ಬಳಕೆ

ಇವತ್ತು ಊಟ ಮಾಡಿ ಬಂದು ನನ್ನ ಸ್ಥಳದಲ್ಲಿ ಕೂತ್ಕೊಂಡಿದೀನಿ. ನನಗೆ ಅಂತರ್ಜಾಲ ಬಳಸುವುದಕ್ಕೆ ಅವಕಾಶ ಇಲ್ಲ. ಆದರೆ ಬಳಸದೆ 9 ಗಂಟೆ 15 ನಿಮಿಷ ಆಫೀಸ್ ನಲ್ಲಿ ಇರುವುದಕ್ಕೆ ನನ್ನ ಕೈಲಿ ಸಾದ್ಯ ಇಲ್ಲ. ಸಾದ್ಯ ಇಲ್ಲ ಅನ್ನುವುದಕ್ಕಿಂತ ಬಹಳ ಕಷ್ಟ ಅಂತ ಹೇಳಬಹುದು. ಆದ್ದರಿಂದ ನಾನ್ ಏನಾದ್ರು ವ್ಯವಸ್ಥೆ ಮಾಡ್ಕೋಬೇಕಾಗಿದೆ ಇಲ್ಲಿ ಒಂದು ಅಧ್ಬುತವಾದ option ಇರುವುದು ಅಂದರೆ "browser" ಅನ್ನು ಯಾರಿಗೆ ಅಂತರ್ಜಾಲಕ್ಕೆ 'access' ಇದೆಯೋ ಅವರ ಹೆಸರಲ್ಲಿ ಶುರು ಮಾಡುವುದು. ಹಾಗೆ ಮಾಡುವುದರಿಂದ ಆ ಒಂದು 'window' ದಲ್ಲಿ ನಾವು ಅಂತರ್ಜಾಲ ಬಳಸಬಹುದು. ಹಾಗೆ ಮಾಡುವುದರಿಂದ ನಾವು ಏನೇ ಹಲ್ಕಾ ಕೆಲಸ ಮಾಡಿ ಸಿಕ್ಕಿ ಹಾಕಿಕೊಂಡರೂ ಅದು ಅವರ ಹೆಸರಲ್ಲಿ log ಆಗುತ್ತದೆ. ಯಾರೂ ಹೀಗೆ ಮಾಡುವುದಿಲ್ಲ ಎನ್ನುವ ನಂಬಿಕೆಯ ಮೇಲೆ ಅವರು ಒಂದು browser ಅವರ ಹೆಸರಲ್ಲಿ ಶುರು ಮಾಡಿ ಕೊಡುತ್ತಾರೆ. ಹೀಗೆ ನಮ್ಮ ML ಕಡೆ ತಂಗಳು ನನ್ನ computer ನಲ್ಲಿ ಶುರು ಮಾಡಿಕೊಟ್ಟಿದ್ದರು. ನಾನು ಅವತ್ತಿನಿಂದ ನೆನ್ನೆಯವರೆಗೂ close ಮಾಡಿರಲಿಲ್ಲ. ಹಾಗಾಗಿ ನಾನು unofficially ಅಂತರ್ಜಾಲ ಬಳಸುತ್ತಿದ್ದೆ. ನೆನ್ನೆ ಏನೋ ಮಾಡಬೇಕಾದರೆ ನನ್ನ internet explorer hang ಆಗಿಹೋಯಿತು. ನಾನು ಅನ್ಯಾಯವಾಗಿ ಅಂತರ್ಜಾಲ ಬಳಸದೆ ಇರುವಂತಾಯಿತು. ಕೂಡಲೇ ನನಗೆ ಏನೋ ದುರಂತ ನಡೆದು ಹೊಯಿತೇನೋ ಅನ್ನೋ ಥರ ಅನ್ನಿಸುವುದಕ್ಕೆ ಶುರುವಾಯಿತು. ಅಂತರ್ಜಾಲಕ್ಕೋಸ್ಕರ ನನ್ನ system ನ ಪರಿಪೂರ್ಣವಾಗಿ ಜಾಲಾಡಿಬಿಟ್ಟೆ ಎಲ್ಲಿಯಾದರೂ password store ಆಗಿದೆಯೇನೋ ಅಂತ. ನನಗೆ ಎಲ್ಲೂ ಸಿಗಲಿಲ್ಲ ಆಮೇಲೆ ನಮಣ್ಣನಿಗೆ ಕರೆ ಮಾಡಿ ಕೇಳಿದೆ ಹೇಗಾದರೂ ಕಂಡು ಹಿಡಿಯಲು ಸಾಧ್ಯವೇ ಎಂದು. ಆ ಕಡೆಯಿಂದ ಬಂದ ನನಗೆ ನಿರಾಸೆ ಮೂಡಿಸಿತು. ನನಗೆ ಬೇರೆ option ಇರಲಿಲ್ಲವಾದ್ದರಿಂದ ನನ್ನ ಹಿಂದೆ ಕೂರುವ ಒಬ್ಬನನ್ನು ಕೇಳಿದೆ "ಗುರು ನಾನ್ ಅಂತರ್ಜಾಲ ಬಳಸಬೇಕು ಸ್ವಲ್ಪ login ಆಗ್ತ್ಯ ಅಂತ. ಅವನು ಪಾಪ ತಕ್ಷಣ ಬಂದು login ಆದ. ನಾನು ಇವಾಗ ಅಂತರ್ಜಾಲ ಬಳಸುತ್ತಿ ದ್ದೀನಿ ಆರಾಮಾಗಿ. ನನಗೆ ಕೆಲವು ಸಲ ನಮ್ company ಕಥೇನೇ ಅರ್ಥ ಆಗಲ್ಲ. ನಾವು ಹೆಸರಿಗೆ Software Engineers ಆದ್ರೆ ಅಂತರ್ಜಾಲ ಬಳಸೋ ಅವಕಾಶ ಇಲ್ಲ. ನಾವು Officenalli ಅಂತರ್ಜಾಲ ಬಳಸಬೇಕು ಅಂದರೆ Delivery ಮುಖ್ಯಸ್ಥನ permission ತೊಗೊಬೇಕಂತೆ ಅಥವ ಇನ್ನೂ ಒಂದೆರಡ್ ವರ್ಷ ಕಾಯಬೇಕು ಅಥವ ಹೀಗೆ ಅವ್ರಿವ್ರ್ ಹೆಸರಲ್ಲಿ login ಆಗಬೇಕು. ಆಮೇಲೆ ಅಂತರ್ಜಲ ಬಳಸೋದ್ರಲ್ಲೂ ನಿಯಮಗಳಿವೆ. ಸಾವಿರಕ್ಕೆ ಒಂಬೈನೂರು sites block ಆಗಿರುತ್ತದೆ. proxy sites ಇಂದ ನಾವು ಎಲ್ಲ sites access ಮಾಡಬಹುದು ಆದರೆ ನಾನು proxy sites ಬಳಸುವುದಿಲ್ಲ. ಮನೆಗೆ ಹೋದಮೇಲೆ ಅಂತರ್ಜಾಲ ಬಳಸುತ್ತೇನೆ ಯಾರ ಅಭ್ಯಂತರವೂ ಇಲ್ಲದ ಹಾಗೆ. ಇವತ್ತು ಶುಕ್ರವಾರ ಆದ ಕಾರಣ ಇಲ್ಲಿ ನನಗೆ ಕೆಲಸ ಮಾಡುವ ಮನಸ್ಸು ಇಲ್ಲ. ಯಾವತ್ತು ನನಗೆ ಪೂರ್ಣ ಮನಸ್ಸು ಇರುವುದಿಲ್ಲ, ಆದರೆ ಶುಕ್ರವಾರ ಅಂತೂ ಒಂದು ತೃಣದಷ್ಟೂ ಇರುವುದಿಲ್ಲ. ಇವಾಗ ಇನ್ನೂ ಸಮಯ 5 ಗಂಟೆ ಆಗಿಲ್ಲ ಆಗಲೇ ನನಗೆ ಮನೆಗೆ ಯಾವಾಗ ಹೋಗುತ್ತೇನೋ ಅನಿಸುತ್ತಿದೆ.

Comments

Popular posts from this blog

House party with the team

Love/Arranged Marriages

Crazy Movie-Marathon